Thursday, December 10, 2009

Jana



ಮು೦ಜಾನೆ ಮನೆ ಬಿಟ್ಟು ಹೊರಗಿಟ್ಟರೆ ಕಾಲು,
ಆ ಕಡೆ ಈ ಕಡೆ ಕೆಟ್ಟ ಶಬ್ಧ, ಕೆಟ್ಟ ಗಾಳಿ,
ಹೊಚ್ಚ ಹೊಸ ಸೂರ್ಯನ ಕೆಳಗಡೆ ಕಪ್ಪು
ಇದೇನ ನಾನು ಬಯಸಿದ್ದು ಅನ್ನೊ ದುಖಃ,
ಇನ್ನ ಎಲ್ಲಿದೆಯೊ ಮನಶ್ಶಾ೦ತಿ ??

ಹೀಗೆ ಕಣ್ಣೀರಿನಲ್ಲಿ ಮೇಲೆ ನೋಡಿದರೆ,
ಅಲ್ಲಿ ಹಾರುತಿತ್ತು ಚಿಕ್ಕ ಚೊಕ್ಕ ಹಕ್ಕಿಯ ಮೇಳ
ತನ್ನದೇ ದಿಕ್ಕಿನಲ್ಲಿ ಉಲ್ಲಾಸದಿ೦ದ ತೇಲುತಿತ್ತು,
ಆಗಸವೆಲ್ಲಾ ತನ್ನದೆ ಅನ್ನೊ ಕೊಬ್ಬಿನಿ೦ದ ನನ್ನನ್ನ ನೊಡುತಿತ್ತು!

ಹಕ್ಕಿಗಿರೊ ಸ್ವಾತ೦ತ್ರ್ಯ ಮನುಶ್ಯನಿಗೆ ಇದೆಯೆ?
ಸಧ್ಯ ನಮಗೂ ಹಕ್ಕಿಗಳ ತರಹ ರೆಕ್ಕೆ ಇದ್ದಿದ್ದರೆ,
ಮಾಡುತ್ತಿದ್ದೀವೆನೊ ಆಗಸದಲ್ಲು ಒ೦ದು ಬೆ೦ಗಳೂರು
ಎಶ್ಟು ಜಾಣೆ ನೊಡು ನೀನು, ಹಕ್ಕಿಗಳಿಗೆ ಹಾರಕ್ಕೆ ಹೇಳಿ,
ನಮಗೆ ನಡೆಯೊಕ್ಕೆ ಹೇಳಿದೆ!!

Wednesday, December 9, 2009

ಅಂತರಾತ್ಮದ ಗೊಂದಲ

ನಾನು ಯಾರು
ನೀನು ಯಾರು
ನಾವಿಬ್ಬರು ಯಾರು

ನೆನ್ನೇನ ನಾನು ಮರೆಯಲ್ಲ
ನಾಳೆನ ನೀನು ನೊಡಲ್ಲ
ಇಂದಂತೂ ಇಬ್ಬರಿಗೂ ಗೊತ್ತಿಲ್ಲ
ಆದರೂ ನಾವಿಬ್ಬರೂ ಸುಮ್ಮನಿರಲ್ಲ

ನೀನು ನಗುವಾಗ, ನಾನು ನಗುವೆ
ನಾನು ನಕ್ಕರೆ, ನೀನು ರುಜು ಹಾಕುವೆ
ನಿನಗೆ ನಾನು ಯಾರು
ನನಗೆ ನೀನು ಯಾರು

ನನ್ನ ಕೂಗಿಗೆ ಮೊರೆಗೊಯ್ಯುವ
ನೀನು ಯಾರು ?
ನನ್ನ ನುಡಿಗೆ ಸ್ಪಂದಿಸುವ
ನೀನು ಯಾರು ?
ನೀನು ನಾನೇನಾ ? ಅಥವ
ನಾನೇ ನೀನಾ ?

Tuesday, December 8, 2009

ಮುಗುಳ್ನಗೆ


ನಿನ್ನ ಮುಗುಳ್ನಗೆಯ ಅರ್ಥ ಯೆನು ?

ಪೂರ್ವ ಜನುಮದ ಸಂಬಂಧವೊ ?
ಈ ಜನುಮದ ಅನುಬಂಧವೊ ?
ನನ್ನ ನೊಡಿ, ನನ್ನ ನಗಿಸಲು,
ನೀನು ಹಾಕುವ ಪಾತ್ರವೊ ?

ಒಮ್ಮೆ ನನ್ನ ತುಟಿಯಲ್ಲೂ ಇತ್ತು ಮುಗುಳ್ನಗೆ,
ಇಂದು ಮಾಯವಾಗಿ ಅವಚಿಕೊಂಡಿದೆ,
ನಿನ್ನ ನೊಡಿ, ಹುಡುಕುವ
ಪ್ರಯತ್ನ ಮಾಡಲೆ ?
ಅಥವ ನಾನು ನೀನಾಗಲ್ಲ ಎಂದು,
ಪರಿತಪಿಸಲೆ ?

ನೀನು ನಾನಾಗಲು ಬಯಸ ಬೇಡ
ನೀನು ನೀನಾಗಿಯೆ ಉಳಿಯಲಿ,
ಇದು ನನ್ನ ಸ್ವಾರ್ಥವೆ ?
ಮುಗ್ಧತೆ ನಿನ್ನ ರೂಪವಾಗಿ,
ಮುಗುಳ್ನಗೆ ನಿನ್ನ ಭಾಷೆಯಾಗಿ,
ಎಂದೆಂದು ಹೀಗೆ ಇರು, ನನ್ನ ಮಗುವೆ.

ಸೋದರತ್ತೆಯ ಮಗಳು.


ಊರಿಗೆ ಹೊರಟಿದ್ದೆ ಸೊದರತ್ತೆ ಮನೆಗೆ
ಅವಳ ಮಗಳ ನೋಡಲಿಕ್ಕೆ

ಮುಂಜಾನೆ ಎದ್ದು ಸ್ನಾನ ಮಾಡಿ
ಹಚ್ಚಿಕೊಂಡೆ ಕೆಂಪು ನಾಮ
ಅವಳ ನೆನಪಲ್ಲೆ ಬಂದಿತ್ತು
ಕನ್ನಡಿಯಲ್ಲಿ ನಗು,ಅದು ಆ ಪ್ರೇಮ
ಹಿಂದಿನ ರಾತ್ರಿ ಯೋಚಿಸಿದ್ದೆ
ಅವಳು ಹೆಂಗಿರಬಹುದು ಅಂತ
ಗೊತ್ತೇ ಆಗ್ಲಿಲ್ಲ ನೊಡ್ರಿ
ಬೆಳಗ್ಗೆ ಹೇಗೆ ಆಯಿತು ಅಂತ

ವರ್ಷಗಳು ಉರುಳಿತು ಅತ್ತೆಯ ನೋಡಿ
ಯುಗಗಳೆ ಆಗಿತ್ತು ಅತ್ತೆಯ ಮಗಳ ನೊಡಿ
ಎಶ್ಟು ಕಷ್ಟ ನೊಡ್ರಿ, ಈ ವಯಸ್ಸು
ಬ್ರಹ್ಮಚಾರಿನೂ ಬಿಡಲಿಲ್ಲ, ಆ ಕನಸು
ದೂರದಲಿ ಕಾಣಿಸಿತು, ನುಣ್ಣನೆಯ ಬೆಟ್ಟ
ಆಗಲೆ ಹುಡುಕಿದ್ದೆ ಪ್ರೇಮದ ಘಟ್ಟ

ಸೂರ್ಯ ಮಲಗಲು, ಅತ್ತೆ ಮನೆ ಸೇರಲು
ಹುಡುಕಿದೆ, ಎಲ್ಲಿ ನನ್ನ ಆ ಹೊನಲು ?
ಹುಚ್ಚು ಮನ ಪ್ರಶ್ನೆ ಹಾಕಿರಲು
ಘಲ್ ಘಲ್ ಅನ್ನುತ ಬಂದಳು ಅವಳು
ಕುಳಿತು ಎದುರು ನನ್ನ ನೊಡಿ ನಾಚುತ ಕೆಳಲು - ಪ್ರಯಾಣ ಚೆನ್ನಾಗಿತ್ತ?
ಪದಗಳು ಹೊರಡದೆ ಕೇಳಿದೆ - ನಿನ್ನ ಶಾಲೆ ಮುಗಿದಿತ್ತ ?

ಊಟ ಮುಗಿಸಿ, ತಲೆಗೆ ಇಡಲು ಒಂದು ತುಂಡು
ನಿದ್ರಾದೇವಿ ಆವರಿಸಿ, ಅವಳು ಮಾಯವಾದಳು
ಮುಂಜಾನೆ ಎದ್ದು ನೊಡಿದರೆ ಹೊಳೆಯಿತು
ನಾನು ಕಂಡದ್ದು ಒಂದು ದೊಡ್ಡ ಕನಸು
ಮುಖ ಪೆಚ್ಚಾಗಿ ಕನ್ನಡಿ ನೋಡಿರಲು
ಮತ್ತೆ ಹೊರಟಿತ್ತು ಸಣ್ಣನೆಯ ನಗೆ ಹೊನಲು.